ಬಳ್ಳೊಳ್ಳಿ ಗ್ರಾಮದಲ್ಲಿ 8 ಮನೆಗಳಿಗೆ ಸರಣಿ ಗಳ್ಳತನ. ಝಳಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಿಲು

 ಝಳಕಿ : ಬಳ್ಳೊಳ್ಳಿ ಗ್ರಾಮದಲ್ಲಿ 8 ಮನೆಗಳಿಗೆ ಸರಣಿ ಗಳ್ಳತನ.

       ಝಳಕಿ : ಇಂಡಿ ತಾಲೂಕಿನ ಝಳಕಿ ಠಾಣಾ ವ್ಯಾಪ್ತಿಯಲ್ಲಿ ಬರುವ ಬಳ್ಳೊಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಯುವ ಕಳ್ಳರು 8 ಮನೆಗಳಿಗೆ ನುಗ್ಗಿ ಸರಣಿ ಗಳ್ಳತನ ನಡೆಸಿ, ಮಿನಿ ವ್ಯಾನ ಓಮಿನಿ ವಾಹನದಲ್ಲಿ ಪರಾರಿಯಾದ್ದಾರೆ ಎಂದು ಝಳಕಿ ಠಾಣಾ ಅಧಿಕಾರಿಗಳು ಮಂಜುನಾಥ್ ತೀರಕನ್ನವರ ತಿಳಿಸಿದರು.



      ಬಳ್ಳೊಳ್ಳಿ ಗ್ರಾಮದ ಬಡ ಜನರು ಕಬ್ಬಿನ ಕಟಾವಕ್ಕೆ, ಇಟಿಂಗಿ ಭಟ್ಟಿಗಳಿಗೆ ದುಡಿಯಲು ಹೊಗಿದ್ದು ಅಂತಹ ಬಡವರ ಮನೆಗಳಿಗೆ ಸುಮಾರು ರಾತ್ರಿ 1:30 ರಿಂದ 2:30 ಸಮಯದಲ್ಲಿ ಸುಮಾರು 8 ಮನೆಗಳಿಗೆ ಬೀಗ ಒಡೆಡಿದ್ದಾರೆ, ಗ್ರಾಮದ ಸಿ. ಸಿ ಕ್ಯಾಮೆರಾ ವಂದರಲ್ಲಿ ನಾಲ್ಕು ಜನ ಯುವಕರು, ಕೈಯಲ್ಲಿದೆ ಮಾರಕಾಸತ್ರಗಳೊಂದಿಗೆ ತಿರುಗಾಡುವಾದಾ ಕಂಡುಬದಿದೆ,  ಆದರೆ ಸರಿಯಾದ ಸಾಕ್ಷಿಗಳು, ಅಥವಾ ಪುರಾವೇಗಳನ್ನು ಕಲೆ ಹಾಕಲು  ಶ್ವಾನ ದಳ ಮತ್ತು ಬೆರಳಚ್ಚು ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ, ಝಳಕಿ ಠಾನೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ಕಾರ್ಯಾಚರಣೆ ನಡೆಸಲಾಗಿದೆ, ಕಳ್ಳತನದಲ್ಲಿ ಖಚಿತವಾಗಿ ಇಂತಿಷ್ಠೆ ವಡವೆ, ಹಣ ಇನ್ನಾವುದೇ ಮೊತ್ತದ ವಿಷಯಗಳ ಸರಿಯಾದ ಮಾಹಿತಿ ದೊರೆತಿಲ್ಲ ಎಂದು ಠಾಣಾ ಅಧಿಕಾರಿಗಳು  ತಿಳಿಸಿದ್ದಾರೆ.

      ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಈರಣ್ಣ ವಾಲಿ, ಹಜರತ ಮುಲ್ಲಾ, ಶರಣಯ್ಯ ಮಠಪತಿ, ಜಂಜುರ್ಡೇ, ಶಿವಲಿಂಗ್ ತುಪ್ಪದ ಪ್ರವೀಣ್ ಬಡಿಗೇರ, ಉಸ್ಮಾನ್ ಪಠಾಣ, ಅಪ್ಪಾಷ್ಯಾ ವಾಲಿಕಾರ, ಸದಾಶಿವ ವಾಲಿಕಾರ ಹಾಗೂ ಗ್ರಾಮಸ್ಥರು ಸಿ. ಸಿ. ಕ್ಯಾಮೆರಾ ಮತ್ತು ಹಲವಾರು ಮಾಹಿತಿ ಕಲ್ಪಿಸಿ ಪೊಲೀಸ್ ಇಲಾಖೆ ಸಿಬ್ಬಂದಿಗಳೊಂದಿಗೆ ಸಹಕರಿಸಿದರು.

           ವರದಿ ಸಿದ್ದಯ್ಯ ಹಿರೇಮಠ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ-ಖಲೀಲ್ ಇಂಡಿಕರ

ಎಸ್.ಜಿ.ಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ವಾರ್ಷಿಕ ಕ್ರೀಡಾಕೂಟ.