ಎಸ್.ಜಿ.ಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ವಾರ್ಷಿಕ ಕ್ರೀಡಾಕೂಟ.
ಇಂಡಿ. ನಗರದ ಎಸ್.ಜಿ.ಬಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 9 ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಯಿತು.
ವಾರ್ಷಿಕ ಕ್ರೀಡಾಕೂಟವನ್ನು ಖ್ಯಾತ ಉದ್ಯಮಿಗಳು ಹಾಗೂ ಮಾಜಿ ಪುರಸಭೆ ಸದಸ್ಯರಾದ ಜೈನುದ್ದಿನ ಬಾಗವಾನ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಜೋತೆಗೆ ಕ್ರೀಡಾ ಚಟುವಟಿಕೆಗಳು ಅಗತ್ಯ. ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಅತ್ಯಂತ ಸಹಕಾರ ಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಖಲೀಲ ಇಂಡಿಕರ ಇಂದಿನ ಯುವ ಜನಾಂಗ ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಬೇಕು, ಮೊಬೈಲ್ ಬಳಕೆ ಕಡಿಮೆಮಾಡಿಕೊಂಡು ಅದರಿಂದ ಆಗುವ ದುಷ್ಪರಿಣಾಮಯಿಂದ ದೂರವಿರಿ ಎಂದು ತಿಳಿಸಿದರು.
ಮಾಜಿ ಸೈನಿಕರಾದ ರಜಾಕಸಾಬ ಬಾಗವಾನ ಮಾತನಾಡಿ ಕ್ರೀಡೆಗಳು ಮನೋರಂಜನ ಹಾಗೂ ದೇಹದಾಡ್ಯತೆಗೆ ಉತ್ತಮ. ದೈಹಿಕ ಆರೋಗ್ಯಕಾರಿ ಚಟುವಟಿಕೆಗಳು ಅತ್ಯವಶ್ಯಕವಾಗಿದೆ ಎಂದರು.
ನೂತನ ವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರಕ್ಕೆ ಆಯ್ಕೆಯಾಗಿರುವ ಸದ್ದಾಂ ಹುಸೇನ್ ಜಮಾದಾರ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿ, ಕ್ರೀಡೆಗಳು ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿದ್ದು, ಶಿಸ್ತು, ಸಹಕಾರ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದು ಹೇಳಿದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾಕೂಟಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ತೌಶೀಫ ಯಾಳಗಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ರೀಯಲ್ ಎಸ್ಟೇಟ್ ಮಾಲಿಕರಾದ ಮೆಹಬೂಬ್ ಬಳಗಾನೂರ ಕ್ರೀಡಾ ಜೋತಿಯನ್ನು ಸ್ವೀಕರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಬ್ದುಲ್ ಸತ್ತಾರಸಾಬ ಬಾಗವಾನ ಕ್ರೀಡೆಯು ಕೇವಲ ಮನರಂಜನೆಯ ಪ್ರತೀಕವಲ್ಲ. ಸಾಧನೆಯ ಪ್ರತಿರೂಪವಾಗಿದೆ. ವಿದ್ಯಾರ್ಥಿ ಜೀವನದಿಂದ ಶಿಸ್ತುಬದ್ಧವಾಗಿ ಕ್ರೀಡೆಯಲ್ಲಿ ಭಾಗವಹಿಸಿಕೊಂಡು ಬಂದರೆ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಇಂಡಿ ತಾಲೂಕ ಅಧ್ಯಕ್ಷರಾದ ಅಬುಶಾಮ ಹವಾಲದಾರ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ಚಾಬುಕಸವಾರ, ರಾಜೇಂದ್ರ ಪವಾರ ಮುಖ್ಯಗುರುಗಳು, ದೈಹಿಕ ಶಿಕ್ಷಕರಾದ ಶಿವಲಿಂಗಪ್ಪ ಓಂಕಾರಿ, ಹಣಮಂತ ಹದಗಲ, ಶಕೀಲ ಅಹ್ಮದ್ ಹುಮನಾಬಾದ, ಹಾಗೂ ಅಲ್ತಾಫ ರೂಗಿ ಸೇರಿದಂತೆ ಶಾಲೆಯ ಬೋಧಕ ಹಾಗೂ ಭೋಧಕೇತರ ಸಿಬ್ಬದಂದಿಗಳು ಹಾಜರಿದ್ದರು.
ಶಾಕೀರಾ ಮೇಡಂ ಕಾರ್ಯಕ್ರಮ ನೀರುಪಣೆ ಮಾಡಿದರು ಹಾಗೂ ಶಿಕ್ಷಕರಾದ ಈರಣ್ಣ ಸರ್ ವಂದನಾರ್ಪಣೆ ಮಾಡಿದರ.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ