ಕಾನಿಪ ಇಂಡಿ ತಾಲೂಕಾ ಘಟಕಕ್ಕೆ 3 ಮತಗಳಿಂದ ಅಬೂಶಾಮ ಹವಾಲ್ದಾರ ಆಯ್ಕೆ.

 ಇಂಡಿ ತಾಲೂಕಾ ಪತ್ರಕರ್ತರ ನೂತನ ಅಧ್ಯಕ್ಷರಾಗಿ ಅಬುಶ್ಯಾಮ ಹವಾಲ್ದಾರ,ಪ್ರಧಾನ ಕಾರ್ಯದರ್ಶಿಯಾಗಿ ರಾಜಕುಮಾರ ಚಾಬುಕಸವಾರ ಆಯ್ಕೆ.



ಇಂಡಿ. ಕಾರ್ಯನಿರತ ಪತ್ರಕರ್ತರ ಸಂಘದ ಇಂಡಿ ತಾಲೂಕ ಘಟಕದ  2025 -28ನೇ ಸಾಲಿನ ಚುನಾವಣೆಯನ್ನು ಬುದವಾರ ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚುನಾವಣೆ ಗೌಪ್ಯವಾಗಿ ಮತದಾನ ಮಾಡುವ ಮೂಲಕ ಚುನಾವಣೆ ಮಾಡಲಾಯಿತು. 

ಇಂಡಿ ಘಟಕದ ಚುನಾವಣೆಯ ಫಲಿತಾಂಶದ ಮೇಲೆ ಜಿಲ್ಲೆಯ ಎಲ್ಲಾ ಪತ್ರಕರ್ತರ ಕುತೂಹಲ ಇತ್ತು. ಯಾಕೆಂದರೆ ಈ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಧರ್ಮದ ಎಲ್ಲಾ ಗುರುಗಳು ಹಾಗೂ ಅನೇಕ ಸ್ವಾಮೀಜಿಗಳು ಭಾಗವಸಿ ತಮ್ಮ ಪ್ರಭಾವವನ್ನು ಬೀರುವಂತೆ ಮಾಡಿದರು. ಆದರೆ ಪ್ರಜ್ಞವಂತ ಪತ್ರಕರ್ತರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಎಲ್ಲಾ ರಾಜಕೀಯ ಮುಖಂಡರು ಸೇರಿದಂತೆ ಎಲ್ಲರಿಗೂ ಸ್ವಹಾರದದ ಸಂದೇಶ ನೀಡಿದರು. ಒಟ್ಟು 26 ಅರ್ಹ ಮತದಾರರಲ್ಲಿ 25 ಜನ ಪತ್ರಕರ್ತರು ಹಾಜರಾಗಿ ಮತದಾನ ಮಾಡಿದರು. ಅಧ್ಯಕ್ಷರಾಗಿ ಅಬೂಶಾಮ ಹವಾಲ್ದಾರ ಅವರು 14 ಮತಗಳ  ಪಡೆಯುವ ಮೂಲಕ ಎರಡನೇ ಅವದಿಗೆ ಪುನರ್ ಆಯ್ಕೆ ಯಾದರು. ಅವರ  ಪ್ರತಿಸ್ಪರ್ಧಿಗಳಾದ ಉಮೇಶ ಬಳಬಟ್ಟಿ 11ಮತಗಳು ಪಡೆದು ಸೂಲು ಅನುಭವಿಸಿದರು. ಉಪಾಧ್ಯಕ್ಷ 2 ಸ್ಥಾನಕ್ಕೆ ಅರವಿಂದ ಖಡೆಖಡೆ 14 ಮತಗಳು ಹಾಗೂ ಭೀರಪ್ಪ ಹೊಸೂರ13 ಮತಗಳ ಪಡೆದು ಆಯ್ಕೆಯಾದರು ಅವರ ಪ್ರತಿಸ್ಪರ್ಧಿ ಸಿದ್ದು ಹತ್ತಳ್ಳಿ 11 ಮತಗಳು ಪಡೆದು ಸೊಲು ಅನುಭವಿಸಿದರು.ಪ್ರಧಾನ ಕಾರ್ಯದರ್ಶಿ ರಾಜಕುಮಾರ ಚಾಬುಕಸವಾರ 13 ಮತಗಳು ಪಡೆದು ಆಯ್ಕೆಯಾದರು ಅವರ ಪ್ರತಿಸ್ಪರ್ಧಿ ಅಲ್ಲಾಬಕ್ಷ ಗೋರೆ 10 ಮತಗಳು ಪಡೆದು ಸೊಲು ಅನುಭವಿಸಿದರು. ಕಾರ್ಯದರ್ಶಿಯಾಗಿ ಸಿದ್ಧಯ್ಯ ಹಿರೇಮಠ, ಅವಿರೋಧವಾಗಿ ಆಯ್ಕೆಯಾದರು.ಖಜಾಂಚಿಯಾಗಿ ಆನಂದ ಗಣಾಚಾರಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣೆಯ ಉಸ್ತುವಾರಿಗಳಾದ ದೇವೇಂದ್ರ ಹೇಳವರ, ರಾಜು ಕೊಂಡಗೂಳಿ ಘೋಷಣಾ ಪತ್ರ ನೀಡಿದರು.ಈ ಸಂದರ್ಭದಲ್ಲಿ ಹಸನ ಮುಜಾವರ,ಪ್ರವೀಣ ಮಠ, ಅಶೋಕ ಕುಲಕರ್ಣಿ,ಜಹಾಂಗೀರ ದೇಸಾಯಿ, ಲಾಲು ರಾಠೋಡ, ಇರ್ಷಾದ್  ಬೋರಮಣಿ, ಇಮ್ರಾನ್ ಮುಜಾವರ, ಅಬ್ದುಲ್ ಬಾಗವಾನ,ರಯಿಶ ಅಷ್ಟೇಕರ, ಇಸಾರ್ ಪಠಾಣ, ಅಬ್ದುಲ್ ರಜಾಕ್ ಹಿಪ್ಪರಗಿ, ಮುಕ್ತಾರ್, ತೌಸೀಫ್ ಹವಾಲ್ದಾರ,ಉಪಸ್ಥಿರಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಳ್ಳೊಳ್ಳಿ ಗ್ರಾಮದಲ್ಲಿ 8 ಮನೆಗಳಿಗೆ ಸರಣಿ ಗಳ್ಳತನ. ಝಳಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಿಲು

ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ-ಖಲೀಲ್ ಇಂಡಿಕರ

ಎಸ್.ಜಿ.ಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ವಾರ್ಷಿಕ ಕ್ರೀಡಾಕೂಟ.