ಇಂಡಿ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಆದ್ಯತೆ – ಸಚಿವ ರಹೀಂ ಖಾನ್ ಶ್ಲಾಘನೆ

ಇಂಡಿ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಆದ್ಯತೆ – ಸಚಿವ ರಹೀಂ ಖಾನ್ ಶ್ಲಾಘನೆ



ಇಂಡಿ: ಇಂಡಿ  ಪುರಸಭೆ ನಗರಸಭೆಯಾಗಿ ಮೇಲ್ದರ್ಜೆ ಪಡೆದ ಹಿನ್ನೆಲೆಯಲ್ಲಿ ನಗರಸಭೆ ಕಾರ್ಯಾಲಯ ಹಾಗೂ ನಗರ ಯೋಜನಾ ಪ್ರಾಧಿಕಾರ ಕಚೇರಿ ಹಾಗೂ ವಿವಿಧ ಕಾಮಗಾರಿ ಉದ್ಘಾಟನಾ ಹಾಗೂ ಶಂಕುಸ್ಥಾಪನೆ ಸಮಾರಂಭಕ್ಕೆ ಆಗಮಿಸಿದ್ದ ಹಜ್ ಮತ್ತು ಪೌರಾಡಳಿತ ಖಾತೆ ಸಚಿವ ರಹೀಂ ಖಾನ್ ಅವರು,

 ನಮ್ಮ ಸರ್ಕಾರದಲ್ಲಿ ಅತಿಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ತಂದಿರುವವರು ಇಂಡಿ ಶಾಸಕರೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಡಿ ಶಾಸಕರನ್ನು ಬಹಳ ಪ್ರೀತಿ ಇಂದ ನುಡುತ್ತಾರೆ.  ಶಾಸಕರಿಂದ ತರಲಾಗುವ ಪ್ರತಿಯೊಂದು ಅಭಿವೃದ್ಧಿ ಯೋಜನೆಗೂ ತಕ್ಷಣವೇ ಅನುಮೋದನೆ ದೊರಕುತ್ತಿದೆ.  ಇಂಡಿ ಶಾಸಕರ ಕಾರ್ಯಕ್ಷಮತೆ ಹಾಗೂ ಸರ್ಕಾರದ ಬೆಂಬಲದ ಕುರಿತು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು.

ಇಂಡಿ ಪಟ್ಟಣವನ್ನು ನಗರಸಭೆಯಾಗಿ ಪರಿವರ್ತಿಸುವಲ್ಲಿ ಶಾಸಕರು ಅಪಾರ ಶ್ರಮ ವಹಿಸಿದ್ದಾರೆ. ಕರ್ನಾಟಕದಲ್ಲಿ ಅನೇಕ ನಗರಗಳು 10 ರಿಂದ 15 ವರ್ಷಗಳಿಂದ ಮೇಲ್ದರ್ಜೆಯ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿವೆ. ಆದರೆ ಇಂಡಿಗೆ ಈ ಗೌರವ ಸಿಕ್ಕಿರುವುದು ಶಾಸಕರ ಪರಿಶ್ರಮದ ಫಲ ಎಂದು ಸಚಿವರು ಹೇಳಿದರು.

“ನಾನು ಸಂಪೂರ್ಣ ಕರ್ನಾಟಕ ರಾಜ್ಯದ ಪ್ರವಾಸ ಮಾಡಿದ್ದೇನೆ. ಆದರೆ ಒಬ್ಬ ಶಾಸಕರನ್ನು ಮುಖ್ಯಮಂತ್ರಿ ಎಷ್ಟೊಂದು ಗೌರವದಿಂದ, ಪ್ರೀತಿಯಿಂದ ಕಾಣುತ್ತಾರೆ ಎಂಬುದು ನನಗೆ ಇಂಡಿಯಲ್ಲೇ ಸ್ಪಷ್ಟವಾಗಿ ಕಂಡಿತು. ನಿಮ್ಮ ಪ್ರೀತಿಯ ಶೈಲಿಗೆ ನಾನು ನನ್ನ ಪರವಾಗಿ ಅಭಿನಂದನೆಗಳು ಹೇಳುತ್ತೇನೆ ಎಂದರು..

     ಇವತ್ತಿನ ದಿನಗಳಲ್ಲಿ ಕೆಲವಬ್ಬ ರಾಜಕಾರಣಿಗಳು ವಿಶಕಾರಿ ರಾಜಕಾರಣ ಮಾಡುತ್ತಾರೆ, ಆದರೆ ಇಂಡಿ ಶಾಸಕರು ಮಾತ್ರ ಸೌಜನ್ಯತೆಯ, ಸಾಮಾನ್ಯರ ಒಳಿತಿಗಾಗಿ ಕೆಲಸ ಮಾಡೋ ನಾಯಕ, ಅವರು ಮಾಡಿರುವ ಕೆಲಸಗಳ ಸರಮಾಲೆನೆ ಇದೆ, ಇಂತಹ ನಾಯಕ ಸಿಗೋದು ಪುಣ್ಯವಂತರಿಗೆ ಮಾತ್ರ, ಯಾವ ರೀತಿಲ್ಲಿ ಬಾಬಾಸಾಹೇಬರ ಎಲ್ಲ ಸಮುದಾಯಕ್ಕೆ ಸಮನಾಗಿ ಸಂವಿಧಾನ ಹಂಚಿಕೆ ಮಾಡಿದ್ದಾರೆ, ಅದೆ ರೀತಿಯಲ್ಲಿ ಪಾಟೀಲರು ನಿಮಗೆ ಸಮಾನತೆ ಕೊಟ್ಟಿದ್ದಾರೆ, ದೇವರು ಕೊಡುವ ಆಮ್ಲಜನಕದಲ್ಲಿ, ನೀರಿನಲ್ಲಿ ಯಾವ ಜಾತಿ ನೋಡದ ನಾವುಗಳು ಮಾತ್ರ ಜನರಲ್ಲಿ ಜಾತಿ ಭೇದ, ಭಾವ ಮಾಡೋದು ಯಾಕೆ, ಸೂರ್ಯ, ಚಂದ್ರ ಎಲ್ಲರಿಗೂ ಬೇಕು ಆದರೆ ಅವರು ಕೊಡುವ ಬೆಳಕಿನಲ್ಲಿ ನಾವು ಜಾತಿ ಭೇದ ಭಾವ ಮಾಡೋದು ಬೇಡಾ, ಬಸವಣ್ಣ, ಬಾಬಾಸಾಹೇಬರು ಒಳ್ಳೆಯ ಭಾವನೆಗಳಿಗೆ, ಒಳ್ಳೆಯ ವಿಚಾರಗಳಿಗೆ ಬೆಲೆ ಕೊಟ್ಟು ನಮಗೆ ಒಳ್ಳೆಯ ಜೀವನ ನಡೆಸಲು ದಾರಿದೀಪವಾಗಿದ್ದರೆ, ಆದರೆ ಕೆಲವರು ಬೀಸುವ ವಿಷಕಾರಿ ಗಾಳಿಗೆ, ಶಬ್ದಗಳಿಗೆ ತಲೆ ಕೊಡದೆ, ನಿಮ್ಮ ಶಾಸಕರಿಗೆ ಸದಾ ನಿಮ್ಮ ಬೆಂಬಲ ಇರಲಿ ಎಂದರು.

           ಇಂಡಿ ಶಾಸಕರು ಯಶವಂತರಾಯಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿ  ಮಾತನಾಡಿ   ನಗರದ ಭವಿಷ್ಯ, ಸರ್ಕಾರದ ಸೌಲಭ್ಯ ನಮ್ಮ ನಗರಕ್ಕೆ ಇದೆ, 52 ರಿಂದ 53 ಸಾವಿರ ಜನರು ವಾಸಿಸುವ ಈ ತಾಲೂಕಿನ ಜನ ಅಪೇಕ್ಷೆ ಪಟ್ಟಂತೆ ಸಿದ್ದರಾಮಯ್ಯ ನವರು ನಮಗೆ ಕೊಟ್ಟಿದ್ದಾರೆ, ಭೈರತಿ ಸುರೇಶ ಇವರು ನಮಗೆ ಕೊಟ್ಟಿರುವ ಸಹಾಯ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬೇಕು, ರಾತ್ರಿ, ಹಗಲು ಎನ್ನದೆ ನಮ್ಮ ತಾಯಂದಿರು ಕೊಡಗಳನ್ನು ಹಿಡಿದು ತಿರುಗಾಡುವದನ್ನು ನೋಡಿದ್ದೇವೆ, ಆದರೆ ಇವತ್ತು ಎಲ್ಲವು ಮರೆಮಾಚಿ ನಮ್ಮ ಇಂಡಿ ಪ್ರಗತಿಯಲ್ಲಿ ಸಾಗಿದೆ ಅನ್ನೋದಕ್ಕೆ ಸಂತೋಷ, ಅಸಾಧ್ಯ ವಾದುದನ್ನ, ಸಾಧ್ಯವಾಗಿ ಮಾಡಿದ ಹೆಗ್ಗಳಿಕೆ ನಮ್ಮದಾಗಿದೆ.


ಈ ಭಾಗದ ರೈತರ ಅಸ್ತಿ ಭೀಮಾಶಂಕರ್ ಸಕ್ಕರೆ ಕಾರ್ಖಾನೆ, ಮನುಷ್ಯ ಮಾತು ಕೊಟ್ಟಮೇಲೆ ಅದನ್ನು ನಿಭಾಯಿಸಿದಾಗ ಮಾತ್ರ ಅದಕ್ಕೊಂದು ಬೆಲೆ, ನಾವು ಮಾಡಿರುವ ಕಾರ್ಯಗಳನ್ನು ಇಡಿ ರಾಜ್ಯ ಹಿಂದಿರಿಗಿ ನೋಡಬೇಕೆನ್ನೋದೆ ನನ್ನ ಉದ್ದೇಶ, ಈ ಭಾಗದಲ್ಲಿ ನಿಂಬೆ ಅಭಿವೃದ್ಧಿ ಮಂಡಳಿ ನಿರ್ಮಾಣ, ಜಿ. ಆಯ್. ಟ್ಯಾಗ, ನಮ್ಮ ತಾಲೂಕಿನ ರೈತರ ಬೆಳೆದ ಬೆಳೆ ನೆರೆ ರಾಷ್ಟ್ರಕ್ಕೆ ಸಾಗುವಂತಹ ಕಾರ್ಯ ಇವತ್ತು ನಡೆದಿದೆ. 31 ವಾರ್ಡಗಳಲ್ಲಿ ಜನರು ಹೇಳಿದ ಸಮಸ್ಸೆ ಪರಿಹಾರಿಸುವಂತೆ, ಕಾರ್ಯ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಗೆ ಒಂದು ಕೊಡುವಂತ ಜಿ. ಟಿ. ಟಿ. ಐ. ಕಾಲೇಜು ಇವತ್ತು ನಮ್ಮ ತಾಲೂಕಿನಲ್ಲಿದೆ ಹೆಮ್ಮೆಯ ವಿಷಯ, ಮೈನರೀಟಿ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಸಿಗುವಂತೆ ನಬಾರ್ಡ್ ವತಿಯಿಂದ ಸೌಲಭ್ಯ ಮಾಡಲಾಗಿದೆ, ಅಪ್ಪರ ಕೃಷ್ಣ ಯೋಜನೆ 80 ಟಿ. ಎಮ್. ಸಿ. ನೀರು ನಮಗೆ ಬಂದರೆ ನಮ್ಮ ರೈತರು ಯಾವತ್ತೂ ಕುಂದುವ ಅವಶ್ಯಕತೆ ಬರಲ್ಲ.  28 ಸಾವಿರ ರೈತರ ಜೀವನ ಬದಲಾವಣೆ ಆದಾಗ ನಮ್ಮ ಜೀವನ ಧನ್ಯ, ಸ್ವತಂತ್ರದ ನಂತರ ದೊಡ್ಡ ಪ್ರಾಜೆಕ್ಟ್, ಯೋಜನೆ ನಮಗೆ ಸಿಕ್ಕಿರೋದು ನಮ್ಮ ಭಾಗ್ಯ, ಹಲಗುಣಕಿಯಲ್ಲಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವಂತಹ ಸೌಲಭ್ಯ ಕಲ್ಪಿಸಲಾಗಿದೆ, ಜಿಲ್ಲೆಗೆ ಸಿಗಬೇಕಾದ ಸೌಲಭ್ಯಗಳು ನಮ್ಮ ತಾಲೂಕಿಗೆ ಸಿಗಬೇಕಾದಲ್ಲಿ ಈ ಭಾಗದ ಜನರು ಕೊಟ್ಟಂತಹ, ಮಾಡಿದಂತಹ ಆಶೀರ್ವಾದ, ನನ್ನ ಭಾಗದ , ಸರ್ವ ಜನಾಂಗಕ್ಕೆ, ಸರ್ವ ವಿಧದಲ್ಲಿ ಯೋಜನೆಗಳು ಮೊಟ್ಟಿರುವ ಸಂತೋಷ ನನಗಿದೆ, ಈ ಕ್ಷೇತ್ರ ನನ್ನ ಪಾಲಿನ ತಾಯಿ, ಈ ತಾಯಿಯನ್ನು ನಮ್ಮ ದೇಶ ಹೆಮ್ಮೆಯಿಂದ ತಲೆ ಎತ್ತಿ ನೋಡುವಂತೆ ಮಾಡೋದೇ ನನ್ನ ಉದ್ದೇಶ, 

ನಾಗಠಾಣ ಶಾಸಕರು ವಿಠಲ್ ಕಟಕದೊಂಡ ಮಾತನಾಡಿ ರಾಜಕೀಯದಲ್ಲಿ ತೊಳ ಬಲ, ಹಣ ಬಲ ಇವೆಲ್ಲದಕ್ಕೂ ಹೆಚ್ಚು ಜನ ಬಲ ಇದ್ದಾಗ ಮಾತ್ರ ನಾವು ಬೆಳೆಯಲು, ಉಳಿಯಲು ಸಾಧ್ಯ, ಇವತ್ತು ಇಂಡಿ ವಿಜಯಪುರ ಜಿಲ್ಲೆಯಲ್ಲಿ 24*7 ನೀರು ಸಿಗಲು, ಶಿಕ್ಷಣ, ಆಸ್ಪತ್ರೆ ಇವೆಲ್ಲದರ ಸೌಲಭ್ಯ ಸಿಗಲು ಕಾರಣಿಭೂತರು ಯಶವಂತರಯಗೌಡ ಪಾಟೀಲರು, ಜಿಲ್ಲೆಗೆ ಯೋಗ್ಯವಾದ ತಾಲೂಕು ಯಾವುದಾದರು ಇದ್ದರೆ ಅದು ಇಂಡಿ, ಮುಂದಿನ ದಿನಗಳಲ್ಲಿ ಇಂಡಿಯನ್ನು ಜಿಲ್ಲೆಯಾಗಿ ಪರಿವರ್ತನೆ ಮಾಡಿಮಾಡಿತ್ತೇವೆ ಎಂದರು.



      ಭೀಮೇಗೆ ಅಂಟಿದ ಕಳಂಕವನ್ನು ತೊಳೆದ ಶಾಸಕರು, ಇಂಡಿ ಜನರಿಗೆ ನೀರಿನ ಕೊರತೆ ನಿಗಿಸಿ, ಇಂಡಿಯನ್ನು ಬಂಗಾರದ ಗಿಂಡಿಯಾಗಿ, ಇಂಡಿಯಲ್ಲಿ ಶೈಕ್ಷಣಿಕ ಕಾಶಿಯಾಗಿ ಪರಿವರ್ತಿಸಿ ಜಿ. ಟಿ. ಟಿ. ಸಿ. ಅಂತಹ ಕಾಲೇಜು ನಿರ್ಮಾಣ ಮಾಡಿ ಜಿಲ್ಲೆಗೆ ಸಮನಾದ ತಾಲೂಕು ನಿರ್ಮಾಣ ಮಾಡಿದ ನಮ್ಮ ಗಂಡು ಎದೆಯ ಧೀರ ರಾಘವೇಂದ್ರ ಕುಲಕರ್ಣಿ ಮಾತನಾಡಿದರು.

       

ಈ ಸಂದರ್ಭದಲ್ಲಿ ನಾಗಠಾಣ ಶಾಸಕರು ವಿಠಲ ಕಟಕದೊಂಡ, ಪ್ರಶಾಂತ್ ಕಾಳೆ, ಜಿಲ್ಲಾಧಿಕಾರಿ ಡಾ. ಆನಂದ ಕೆ, ಉಪ ವಿಭಾಗಾಧಿಕಾರಿಗಳು ಚಿದಾನಂದ ಗುರುಸ್ವಾಮಿ, ಪೊಲೀಸ್ ಉಪಾಧಿಕ್ಷಕರು ಸದಾಶಿವ ಕಟ್ಟಿಮನಿ, ಸುನೀತಾ ಲಾಡ, ತಹಶೀಲ್ದಾರ  ಬಿ. ಎಸ್. ಕಡಕಭಾವಿ, ಪೌರಾಯುಕ್ತರು ನಗರ ಸಭೆ ಇಂಡಿ ಶಿವಾನಂದ ಪೂಜಾರಿ, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷರು ಇಲಿಯಾಜ ಬೋರಾಮಣಿ, ತಾಲೂಕ ಗ್ಯಾರಂಟಿ ಯೋಜನೆ ಅಧ್ಯಕ್ಷ ಪ್ರಶಾಂತ ಕಾಳೆ  ಬಿ. ಎಸ್. ಸೌದಾಗರ, ಬಿ. ಸಿ. ಸಾವಕಾರ, ನೀಲಕಂಠಗೌಡ ಬಿರಾದಾರ, ದಯಾನಂದ ಮಠ್, ಭೀಮುಕಾಕಾ ಕವಲಗಿ, ಜಾವೀದ ಮೋಮಿನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಕನ್ನಡ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಹಾಶಿಂಪೀರ ವಾಲಿಕಾರ,ಶ್ರೀಕಾಂತ ಕೊಡಿಗನೂರ, ರಯೀಸ್ ಆಸ್ಟೇಕರ,   ಸೇರಿದಂತೆ ನಗರ ಸಭೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು  ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಳ್ಳೊಳ್ಳಿ ಗ್ರಾಮದಲ್ಲಿ 8 ಮನೆಗಳಿಗೆ ಸರಣಿ ಗಳ್ಳತನ. ಝಳಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಿಲು

ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ-ಖಲೀಲ್ ಇಂಡಿಕರ

ಎಸ್.ಜಿ.ಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ವಾರ್ಷಿಕ ಕ್ರೀಡಾಕೂಟ.