ಪೋಸ್ಟ್‌ಗಳು

ಡಿಸೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಸ್.ಜಿ.ಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ವಾರ್ಷಿಕ ಕ್ರೀಡಾಕೂಟ.

ಇಮೇಜ್
 ಇಂಡಿ. ನಗರದ ಎಸ್.ಜಿ.ಬಿ ಆಂಗ್ಲ ಮಾಧ್ಯಮ  ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 9 ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಯಿತು.  ವಾರ್ಷಿಕ ಕ್ರೀಡಾಕೂಟವನ್ನು ಖ್ಯಾತ ಉದ್ಯಮಿಗಳು ಹಾಗೂ ಮಾಜಿ ಪುರಸಭೆ ಸದಸ್ಯರಾದ   ಜೈನುದ್ದಿನ ಬಾಗವಾನ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಜೋತೆಗೆ ಕ್ರೀಡಾ ಚಟುವಟಿಕೆಗಳು ಅಗತ್ಯ. ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಅತ್ಯಂತ ಸಹಕಾರ ಎಂದು ಹೇಳಿದರು.  ಮುಖ್ಯ ಅಥಿತಿಗಳಾಗಿ ಆಗಮಿಸಿದ ಖಲೀಲ ಇಂಡಿಕರ ಇಂದಿನ ಯುವ ಜನಾಂಗ ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಬೇಕು, ಮೊಬೈಲ್‌ ಬಳಕೆ ಕಡಿಮೆಮಾಡಿಕೊಂಡು ಅದರಿಂದ ಆಗುವ ದುಷ್ಪರಿಣಾಮಯಿಂದ ದೂರವಿರಿ ಎಂದು ತಿಳಿಸಿದರು. ಮಾಜಿ ಸೈನಿಕರಾದ ರಜಾಕಸಾಬ ಬಾಗವಾನ ಮಾತನಾಡಿ ಕ್ರೀಡೆಗಳು ಮನೋರಂಜನ ಹಾಗೂ ದೇಹದಾಡ್ಯತೆಗೆ ಉತ್ತಮ. ದೈಹಿಕ ಆರೋಗ್ಯಕಾರಿ ಚಟುವಟಿಕೆಗಳು ಅತ್ಯವಶ್ಯಕವಾಗಿದೆ ಎಂದರು.  ನೂತನ ವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರಕ್ಕೆ ಆಯ್ಕೆಯಾಗಿರುವ ಸದ್ದಾಂ ಹುಸೇನ್‌ ಜಮಾದಾರ ಕಾರ್ಯಕ್ರಮದ ಉದ್ದೇಶಿಸಿ   ಮಾತನಾಡಿ, ಕ್ರೀಡೆಗಳು ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿದ್ದು, ಶಿಸ್ತು, ಸಹಕಾರ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದು ಹೇಳಿದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾಕೂಟಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಈ...

ಇಂಡಿ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಆದ್ಯತೆ – ಸಚಿವ ರಹೀಂ ಖಾನ್ ಶ್ಲಾಘನೆ

ಇಮೇಜ್
ಇಂಡಿ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಆದ್ಯತೆ – ಸಚಿವ ರಹೀಂ ಖಾನ್ ಶ್ಲಾಘನೆ ಇಂಡಿ: ಇಂಡಿ  ಪುರಸಭೆ ನಗರಸಭೆಯಾಗಿ ಮೇಲ್ದರ್ಜೆ ಪಡೆದ ಹಿನ್ನೆಲೆಯಲ್ಲಿ ನಗರಸಭೆ ಕಾರ್ಯಾಲಯ ಹಾಗೂ ನಗರ ಯೋಜನಾ ಪ್ರಾಧಿಕಾರ ಕಚೇರಿ ಹಾಗೂ ವಿವಿಧ ಕಾಮಗಾರಿ ಉದ್ಘಾಟನಾ ಹಾಗೂ ಶಂಕುಸ್ಥಾಪನೆ ಸಮಾರಂಭಕ್ಕೆ ಆಗಮಿಸಿದ್ದ ಹಜ್ ಮತ್ತು ಪೌರಾಡಳಿತ ಖಾತೆ ಸಚಿವ ರಹೀಂ ಖಾನ್ ಅವರು,  ನಮ್ಮ ಸರ್ಕಾರದಲ್ಲಿ ಅತಿಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ತಂದಿರುವವರು ಇಂಡಿ ಶಾಸಕರೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಡಿ ಶಾಸಕರನ್ನು ಬಹಳ ಪ್ರೀತಿ ಇಂದ ನುಡುತ್ತಾರೆ.  ಶಾಸಕರಿಂದ ತರಲಾಗುವ ಪ್ರತಿಯೊಂದು ಅಭಿವೃದ್ಧಿ ಯೋಜನೆಗೂ ತಕ್ಷಣವೇ ಅನುಮೋದನೆ ದೊರಕುತ್ತಿದೆ.  ಇಂಡಿ ಶಾಸಕರ ಕಾರ್ಯಕ್ಷಮತೆ ಹಾಗೂ ಸರ್ಕಾರದ ಬೆಂಬಲದ ಕುರಿತು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು. ಇಂಡಿ ಪಟ್ಟಣವನ್ನು ನಗರಸಭೆಯಾಗಿ ಪರಿವರ್ತಿಸುವಲ್ಲಿ ಶಾಸಕರು ಅಪಾರ ಶ್ರಮ ವಹಿಸಿದ್ದಾರೆ. ಕರ್ನಾಟಕದಲ್ಲಿ ಅನೇಕ ನಗರಗಳು 10 ರಿಂದ 15 ವರ್ಷಗಳಿಂದ ಮೇಲ್ದರ್ಜೆಯ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿವೆ. ಆದರೆ ಇಂಡಿಗೆ ಈ ಗೌರವ ಸಿಕ್ಕಿರುವುದು ಶಾಸಕರ ಪರಿಶ್ರಮದ ಫಲ ಎಂದು ಸಚಿವರು ಹೇಳಿದರು. “ನಾನು ಸಂಪೂರ್ಣ ಕರ್ನಾಟಕ ರಾಜ್ಯದ ಪ್ರವಾಸ ಮಾಡಿದ್ದೇನೆ. ಆದರೆ ಒಬ್ಬ ಶಾಸಕರನ್ನು ಮುಖ್ಯಮಂತ್ರಿ ಎಷ್ಟೊಂದು ಗೌರವದಿಂದ, ಪ್ರೀತಿಯಿಂದ ಕಾಣುತ್ತಾರೆ ಎಂಬುದು ನನಗೆ ಇಂಡಿಯಲ್ಲೇ ಸ್ಪಷ್ಟವ...

ಅಂಜುಮನ್ ಮೈದಾನದಲ್ಲಿ ಲೆಜೆಂಡ್ ಟೂರ್ನಮೆಂಟ್. ಫೈನಲ್ ಗೆದ್ದ ತಾಜ್ ಬಿ .ಗ್ರಾಂಡ್ ಟೀಮ್

ಇಮೇಜ್
 ಇಂಡಿ: 45 ವರ್ಷ ಮೇಲ್ಪಟ್ಟ ಆಟಗಾರರ ಲೆಜೆಂಡ್ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸ್ಪಂದನೆ ಶಾಸಕ ಯಶವಂತರಾಯಗೌಡ ಪಾಟೀಲರಿಂದ ಆಟಗಾರರಿಗೆ ಗೌರವ ನಮನ.  ಇಂಡಿ ನಗರದ ಅಂಜುಮನ್ ಮೈದಾನದಲ್ಲಿ 45 ವರ್ಷ ಮೇಲ್ಪಟ್ಟ ಅನುಭವೀ ಆಟಗಾರರಿಗಾಗಿ ಆಯೋಜಿಸಲಾದ ಲೆಜೆಂಡ್ ಕ್ರಿಕೆಟ್ ಟೂರ್ನಮೆಂಟ್ ಕ್ರೀಡಾ ಇತಿಹಾಸದಲ್ಲಿ ಮರೆಯಲಾಗದ ಕ್ಷಣವಾಗಿ ಮೂಡಿಬಂದಿತು. ಇಂಡಿ ನಗರದ ಯುವ ಕ್ರಿಕೆಟ್ ಆಟಗಾರರಾದ ಅಬೂಬಕ್ಕರ್ ಶೇಖ್, ಸಲಾಹುದ್ದೀನ್ ಪಠಾಣ್, ಸಾದಿಕ್ ಬಾಗವಾನ್ ಹಾಗೂ ಮೊಹ್ಸಿನ್ ಪಠಾಣ್ ಅವರ ಮುಂದಾಳತ್ವದಲ್ಲಿ ಇಂಡಿ ತಾಲ್ಲೂಕಿನ 45 ವರ್ಷ ಮೇಲ್ಪಟ್ಟ ಆಟಗಾರರಿಗೆ ಈ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ಹಿರಿಯ ಆಟಗಾರರು ತಮ್ಮ ಫಿಟ್‌ನೆಸ್, ಶಿಸ್ತು ಮತ್ತು ಕ್ರೀಡೆಯ ಮೇಲಿನ ಅಪಾರ ಆಸಕ್ತಿಯನ್ನು ಪ್ರದರ್ಶಿಸಿ ಕ್ರಿಕೆಟ್ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ,  ಇಂದು ಮೈದಾನದಲ್ಲಿ ಆಟವಾಡುತ್ತಿರುವ ಈ ಲೆಜೆಂಡ್ ಆಟಗಾರರು ಮುಂದಿನ ಪೀಳಿಗೆಗೆ ಜೀವಂತ ಮಾದರಿಯಾಗಿದ್ದಾರೆ. ಕ್ರೀಡೆಗಳು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಯುವಕರಲ್ಲಿ ಶಿಸ್ತು, ಏಕತೆ ಮತ್ತು ಸಕಾರಾತ್ಮಕ ಚಿಂತನೆ ಬೆಳೆಸಲು ಸಹಕಾರಿ,” ಎಂದರು. ಭಾರತವು ಜಾಗತಿಕ ಮಟ್ಟದಲ್ಲಿ, ವಿಶೇಷವಾಗಿ ಕ್ರಿಕೆಟ್ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದೆ. ಆ ಪರಂಪ...

ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ-ಖಲೀಲ್ ಇಂಡಿಕರ

ಇಮೇಜ್
 ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ-ಖಲೀಲ್ ಇಂಡಿಕರ ಇಂಡಿ: 'ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ, ನಿರಂತರ ಕ್ರೀಡಾ ಚಟುವಟಿಕೆಗಳು ನಮ್ಮ ಜೀವನಕ್ಕೆ ಹುಮ್ಮಸ್ಸು ನೀಡುತ್ತವೆ’ ಎಂದು ಸಾಮಾಜಿಕ ಕಾರ್ಯಕರ್ತ ಖಲೀಲ್ ಇಂಡಿಕರ ಹೇಳಿದರು.        ಬುಧವಾರದಂದು ನಗರದ ಶಮ್ಸ್ ಉರ್ದು ಮಾಧ್ಯಮ ಹಾಗೂ ಬಾಲ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.      ಕ್ರೀಡೆ ಮಾನವನಲ್ಲಿ ನಿರಂತರ ಕ್ರಿಯಾಶೀಲತೆಯ ಜೊತೆಗೆ ನವ ಚೈತನ್ಯವನ್ನು ಉಂಟು ಮಾಡುತ್ತದೆ. ಆರೋಗ್ಯವೇ ಭಾಗ್ಯ ಎಂಬಂತೆ ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವಿಕೆಯಿಂದ ಮುಪ್ಪಿನ ಸಮಯದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.         ಮುಖ್ಯ ಶಿಕ್ಷಕ ಫಯಾಜ್ ಟಾಂಗೆವಾಲೆ ಮಾತನಾಡಿ, ಆಧುನಿಕ ಯುಗದಲ್ಲಿ ಮಾನವನ ಜೀವನ ಯಾಂತ್ರಿಕ ಜೀವನವಾಗಿದೆ. ವಿದ್ಯಾರ್ಥಿಗಳು ಪಠ್ಯಕ್ಕೆ ನೀಡುವ ಮಹತ್ವವನ್ನು ಕ್ರೀಡೆಗೂ ನೀಡಬೇಕು. ಕ್ರೀಡೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.         ಪ್ಯಾರಡೈಸ್ ಸಾಮಾಜಿಕ ಸಂಘದ ಅಧ್ಯಕ್ಷ ಅಖಿಲ ಹವಾಲ್ದಾರ, ಅಬು ನ್ಯೂಸ್ ವರದಿಗಾರ ಹಜರತ್ ಅಲಿ ಮುಲ್ಲಾ, ಗುತ್ತಿಗೆದಾರರಾದ ಸಲೀಂ ಮೊಮಿನ್, ಷರೀಫ್ ತೋಳನೂರ, ಸಂಸ್ಥೆಯ ಕಾರ್ಯದರ್ಶಿ ಮಹ್ಮದ್ ಉಮೇರ ಅರಬ ಸೇರಿದಂತೆ...

ಬಳ್ಳೊಳ್ಳಿ ಗ್ರಾಮದಲ್ಲಿ 8 ಮನೆಗಳಿಗೆ ಸರಣಿ ಗಳ್ಳತನ. ಝಳಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಿಲು

ಇಮೇಜ್
 ಝಳಕಿ : ಬಳ್ಳೊಳ್ಳಿ ಗ್ರಾಮದಲ್ಲಿ 8 ಮನೆಗಳಿಗೆ ಸರಣಿ ಗಳ್ಳತನ.        ಝಳಕಿ : ಇಂಡಿ ತಾಲೂಕಿನ ಝಳಕಿ ಠಾಣಾ ವ್ಯಾಪ್ತಿಯಲ್ಲಿ ಬರುವ ಬಳ್ಳೊಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಯುವ ಕಳ್ಳರು 8 ಮನೆಗಳಿಗೆ ನುಗ್ಗಿ ಸರಣಿ ಗಳ್ಳತನ ನಡೆಸಿ, ಮಿನಿ ವ್ಯಾನ ಓಮಿನಿ ವಾಹನದಲ್ಲಿ ಪರಾರಿಯಾದ್ದಾರೆ ಎಂದು ಝಳಕಿ ಠಾಣಾ ಅಧಿಕಾರಿಗಳು ಮಂಜುನಾಥ್ ತೀರಕನ್ನವರ ತಿಳಿಸಿದರು.       ಬಳ್ಳೊಳ್ಳಿ ಗ್ರಾಮದ ಬಡ ಜನರು ಕಬ್ಬಿನ ಕಟಾವಕ್ಕೆ, ಇಟಿಂಗಿ ಭಟ್ಟಿಗಳಿಗೆ ದುಡಿಯಲು ಹೊಗಿದ್ದು ಅಂತಹ ಬಡವರ ಮನೆಗಳಿಗೆ ಸುಮಾರು ರಾತ್ರಿ 1:30 ರಿಂದ 2:30 ಸಮಯದಲ್ಲಿ ಸುಮಾರು 8 ಮನೆಗಳಿಗೆ ಬೀಗ ಒಡೆಡಿದ್ದಾರೆ, ಗ್ರಾಮದ ಸಿ. ಸಿ ಕ್ಯಾಮೆರಾ ವಂದರಲ್ಲಿ ನಾಲ್ಕು ಜನ ಯುವಕರು, ಕೈಯಲ್ಲಿದೆ ಮಾರಕಾಸತ್ರಗಳೊಂದಿಗೆ ತಿರುಗಾಡುವಾದಾ ಕಂಡುಬದಿದೆ,  ಆದರೆ ಸರಿಯಾದ ಸಾಕ್ಷಿಗಳು, ಅಥವಾ ಪುರಾವೇಗಳನ್ನು ಕಲೆ ಹಾಕಲು  ಶ್ವಾನ ದಳ ಮತ್ತು ಬೆರಳಚ್ಚು ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ, ಝಳಕಿ ಠಾನೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ಕಾರ್ಯಾಚರಣೆ ನಡೆಸಲಾಗಿದೆ, ಕಳ್ಳತನದಲ್ಲಿ ಖಚಿತವಾಗಿ ಇಂತಿಷ್ಠೆ ವಡವೆ, ಹಣ ಇನ್ನಾವುದೇ ಮೊತ್ತದ ವಿಷಯಗಳ ಸರಿಯಾದ ಮಾಹಿತಿ ದೊರೆತಿಲ್ಲ ಎಂದು ಠಾಣಾ ಅಧಿಕಾರಿಗಳು  ತಿಳಿಸಿದ್ದಾರೆ.       ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಈರಣ್ಣ ವಾಲಿ, ಹಜರತ ಮುಲ್ಲಾ, ...

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ನಿಧನ- ಶಾಸಕ ಯಶವಂತರಾಯಗೌಡ ಪಾಟೀಲ ಸಂತಾಪ ಸೂಚಿಸಿದರು.

ಇಮೇಜ್
       ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ನಿಧನ- ಶಾಸಕ ಯಶವಂತರಾಯಗೌಡ ಪಾಟೀಲ ಸಂತಾಪ ಸೂಚಿಸಿದರು.  ಇಂಡಿ- ಕಾಂಗ್ರೆಸ್  ಹಿರಿಯ ಶಾಸಕ ರಾಜಕೀಯ ನೇತಾರ ಶಾಮನೂರ ಶಿವಶಂಕರಪ್ಪನವರ ನಿಧನ ಸುದ್ದಿ ತಿಳಿದು ಮನಸ್ಸಿಗೆ ಅಘಾತವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಮನೂರ ಶಿವಶಂಕರಪ್ಪನವರು ಅತ್ಯೆಂತ ಹಿರಿಯ ರಾಜಕಾರಣಿಗಳು ಹಾಗೂ  ಪಕ್ಷದ ಮಾರ್ಗದರ್ಶಕರು ಇವರು ೬ ಬಾರಿ ಶಾಸಕರಾಗಿ ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ದಾವಣಗೇರಿ ದಕ್ಷಿಣ ಕ್ಷೇತ್ರದ ಶಾಸಕರಾಗಿ  ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ವಿವಿಧ ಸರಕಾರಿ ಪ್ರಮುಖ ಖಾತೆಗಳನ್ನು ನಿಭಾಯಿಸುವ ಮೂಲಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.    ಈ ಹಿಂದೆ ಅತೀವೃಷ್ಠಿಯಾಗಿ ರೈತರ ತೋಟಗಾರಿಕೆ ಬೆಳೆಗಳು ಹಾನಿಯಾಗಿರುವಾಗ ನನ್ನ ಮತಕ್ಷೇತ್ರಕ್ಕೆ ಖುದ್ದಾಗಿ ಬಂದು ರೈತರ ಜಮೀನುಗಳಲ್ಲಿ ಬೆಳೆದ ಲಿಂಬೆ, ದಾಳಿಂಬೆ, ದ್ರಾಕ್ಷಿ, ಬಾಳೆ,ಪಪ್ಪಾಯಿ ಇತರೆ ತೋಟಗಾರಿಕೆ ಬೆಳೆಗಳು ನಾಶವಾಗಿರುವುದನ್ನು ಕಣ್ಣಾರೆ ಕಂಡು ರೈತರಿಗೆ ಆತ್ಮಸ್ಥೆರ್ಯ ತುಂಬಿದರು. ಇಷ್ಟೇ ಅಲ್ಲದೆ ವೈಯಕ್ತಿಕ ನನ್ನ ರಾಜಕೀಯ ಜೀವನದಲ್ಲಿ ಮಾರ್ಗದರ್ಶಕರು ಆಗಿದ್ದರು. ನೇರ, ನಡೆ- ನುಡಿಯುಳ್ಳ ರಾಜಕೀಯ ನಾಯಕರು ಇಂತಹವರು ಸಿಗುವುದು ಅಪರೂಪ ಇವರ...

ಕಾನಿಪ ಇಂಡಿ ತಾಲೂಕಾ ಘಟಕಕ್ಕೆ 3 ಮತಗಳಿಂದ ಅಬೂಶಾಮ ಹವಾಲ್ದಾರ ಆಯ್ಕೆ.

ಇಮೇಜ್
 ಇಂಡಿ ತಾಲೂಕಾ ಪತ್ರಕರ್ತರ ನೂತನ ಅಧ್ಯಕ್ಷರಾಗಿ ಅಬುಶ್ಯಾಮ ಹವಾಲ್ದಾರ,ಪ್ರಧಾನ ಕಾರ್ಯದರ್ಶಿಯಾಗಿ ರಾಜಕುಮಾರ ಚಾಬುಕಸವಾರ ಆಯ್ಕೆ. ಇಂಡಿ. ಕಾರ್ಯನಿರತ ಪತ್ರಕರ್ತರ ಸಂಘದ ಇಂಡಿ ತಾಲೂಕ ಘಟಕದ  2025 -28ನೇ ಸಾಲಿನ ಚುನಾವಣೆಯನ್ನು ಬುದವಾರ ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚುನಾವಣೆ ಗೌಪ್ಯವಾಗಿ ಮತದಾನ ಮಾಡುವ ಮೂಲಕ ಚುನಾವಣೆ ಮಾಡಲಾಯಿತು.  ಇಂಡಿ ಘಟಕದ ಚುನಾವಣೆಯ ಫಲಿತಾಂಶದ ಮೇಲೆ ಜಿಲ್ಲೆಯ ಎಲ್ಲಾ ಪತ್ರಕರ್ತರ ಕುತೂಹಲ ಇತ್ತು. ಯಾಕೆಂದರೆ ಈ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಧರ್ಮದ ಎಲ್ಲಾ ಗುರುಗಳು ಹಾಗೂ ಅನೇಕ ಸ್ವಾಮೀಜಿಗಳು ಭಾಗವಸಿ ತಮ್ಮ ಪ್ರಭಾವವನ್ನು ಬೀರುವಂತೆ ಮಾಡಿದರು. ಆದರೆ ಪ್ರಜ್ಞವಂತ ಪತ್ರಕರ್ತರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಎಲ್ಲಾ ರಾಜಕೀಯ ಮುಖಂಡರು ಸೇರಿದಂತೆ ಎಲ್ಲರಿಗೂ ಸ್ವಹಾರದದ ಸಂದೇಶ ನೀಡಿದರು. ಒಟ್ಟು 26 ಅರ್ಹ ಮತದಾರರಲ್ಲಿ 25 ಜನ ಪತ್ರಕರ್ತರು ಹಾಜರಾಗಿ ಮತದಾನ ಮಾಡಿದರು. ಅಧ್ಯಕ್ಷರಾಗಿ ಅಬೂಶಾಮ ಹವಾಲ್ದಾರ ಅವರು 14 ಮತಗಳ  ಪಡೆಯುವ ಮೂಲಕ ಎರಡನೇ ಅವದಿಗೆ ಪುನರ್ ಆಯ್ಕೆ ಯಾದರು. ಅವರ  ಪ್ರತಿಸ್ಪರ್ಧಿಗಳಾದ ಉಮೇಶ ಬಳಬಟ್ಟಿ 11ಮತಗಳು ಪಡೆದು ಸೂಲು ಅನುಭವಿಸಿದರು. ಉಪಾಧ್ಯಕ್ಷ 2 ಸ್ಥಾನಕ್ಕೆ ಅರವಿಂದ ಖಡೆಖಡೆ 14 ಮತಗಳು ಹಾಗೂ ಭೀರಪ್ಪ ಹೊಸೂರ13 ಮತಗಳ ಪಡೆದು ಆಯ್ಕೆಯಾದರು ಅವರ ಪ್ರತಿಸ್ಪರ್ಧಿ ಸಿದ್ದು ಹತ್ತಳ್ಳಿ 11 ಮತಗಳು ಪಡೆದು ಸೊಲು ಅನುಭವಿಸಿದರು....